ಒಂದಾನೊಂದು ಕಾಡಿನಲ್ಲಿ ಒಂದು ಬೆಕ್ಕು ವಾಸಿಸುತಿತ್ತು. ಅದೇ ಕಾಡಿನಲ್ಲಿ ಒಂದು ಸಿಂಹವೂ ವಾಸವಾಗಿತ್ತು. ಆ ಸಿಂಹವು ಬೆಕ್ಕಿನ ಜತೆ ಸ್ನೆಹಮಾಡಿಕೊಂಡಿತು, ಮತ್ತು ಹೇಳಿತು " ನಿನಗೆ ಏನೆಲ್ಲಾ ವಿದ್ಯೆ ಗೊತ್ತಿದೆಯೋ ನೀನು ನನಗೆ ಅದನ್ನು ಕಲಿಸಬೇಕು"
ಅದಕ್ಕೆ ಬೆಕ್ಕು ಸರಿ ಎಂದು ಎಲ್ಲಾ ವಿದ್ಯೆಯನ್ನೂ ಸಿಂಹ'ಕ್ಕೆ ಕಲಿಸಿತು. ಒಂದು ದಿನ ಸಿಂಹ ಬೆಕ್ಕಿನ ಮೇಲೆ ಆಕ್ರಮಣ ಮಾಡಲು ಹೋಯಿತು. ಆಗ ಬೆಕ್ಕು ಸರ್ರನೆ ಜಿಗಿದು ಮರ ಹತ್ತಿತು, ಆಗ ಸಿಂಹ ಬೆಕ್ಕನ್ನು ಪ್ರಶ್ನಿಸಿತು" ನೀನು ಹೇಳಿದೆ , ನಿನಗೆ ನಾನು ಎಲ್ಲ ವಿದ್ಯೆ ಕಲಿಸುತ್ತೇನೆಂದು". ಆಗ ಬೆಕ್ಕು ಹೇಳಿತು "ನನಗೆ ತಿಳಿದಿತ್ತು ನೀನು ಹೀಗೆ ಮಾಡುವೆ ಎಂದು, ಆದ್ದರಿಂದ ನಾನು ಇದೊಂದು ವಿದ್ಯೆ ನಿನಗೆ ಹೇಳಿಕೊಡಲಿಲ್ಲ."
1 comment:
ಹುಟ್ಟ ಗುಣ ಎಂದಿಗೂ ಹೋಗುವುದಿಲ್ಲ
Post a Comment